ರಾಜ್ಯ ಕಾರಾಗೃಹ ಇಲಾಖೆಯ ನೂತನ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.
ಜೈಲುಗಳಲ್ಲಿ ಮೊಬೈಲ್ ಫೋನ್, ಮಾದಕ ವಸ್ತು ಪೂರೈಕೆಯಂತಹ ಅಕ್ರಮ ಚಟುವಟಿಕೆಗಳಿಗೆ ಸಿಬ್ಬಂದಿ ಸಹಕರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮೊದಲ ಸಭೆಯಲ್ಲೇ ಎಚ್ಚರಿಕೆ ನೀಡಿದರು.
ಕೈದಿಗಳ ಪುನರ್ವಸತಿ, ಕೌಶಲ ತರಬೇತಿ ಮತ್ತು ಜೈಲುಗಳ ಭದ್ರತಾ ವ್ಯವಸ್ಥೆ ಆಧುನೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.




