Homeವಿದ್ಯಮಾನಮಹಿಳಾ ಸರ್ಕಾರಿ ನೌಕರರ ಮುಟ್ಟಿನ ರಜೆಗೆ ಸ್ವಯಂಚಾಲಿತ ಅನುಮೋದನೆ

ಮಹಿಳಾ ಸರ್ಕಾರಿ ನೌಕರರ ಮುಟ್ಟಿನ ರಜೆಗೆ ಸ್ವಯಂಚಾಲಿತ ಅನುಮೋದನೆ

ರಾಜ್ಯದ ಮಹಿಳಾ ಸರ್ಕಾರಿ ನೌಕರರು ಸಲ್ಲಿಸುವ ಮುಟ್ಟಿನ ರಜೆ ಅರ್ಜಿಗಳು ಇನ್ನು ಮುಂದೆ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳಲಿವೆ. ಇದಕ್ಕಾಗಿ ನೌಕರರ ರಜೆ ನಿರ್ವಹಣಾ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ಮಾಡಲಾಗಿದೆ.

ಮೇಲಧಿಕಾರಿಗಳ ಅನುಮತಿಗಾಗಿ ಕಾಯುವ ಅಗತ್ಯ ಇಲ್ಲದಿರುವುದರಿಂದ ನೌಕರರಿಗೆ ಅನಗತ್ಯ ಮುಜುಗರ ತಪ್ಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಈ ಕ್ರಮವನ್ನು ನೌಕರರ ಸಂಘಟನೆಗಳು ಸ್ವಾಗತಿಸಿದ್ದು, ಖಾಸಗಿ ವಲಯದಲ್ಲೂ ಇಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಆಗ್ರಹಿಸಿವೆ.

ಸಂಬಂಧಿತ ಸುದ್ದಿ

ಪ್ರತಿಕ್ರಿಯೆ ನೀಡಿ

ದಯವಿಟ್ಟು ನಿಮ್ಮ ಪ್ರತಿಕ್ರಿಯೆ ಬರೆಯಿರಿ!
Please enter your name here

- ಜಾಹೀರಾತು -
Ganpath Technologies – Web Design & Development, ganpath.com, +91-9739518207

ಹೆಚ್ಚು ಓದಿದ್ದು

Recent Comments