2028ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಷದ ಗುರಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ದ್ವಿವೇದಿ ಹೇಳಿದ್ದಾರೆ.
ಬೂತ್ ಮಟ್ಟದಿಂದ ಸಂಘಟನೆ ಬಲಪಡಿಸುವುದು, ಯುವಜನರು ಮತ್ತು ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದತ್ತ ಸೆಳೆಯುವುದು ಮುಂದಿನ ಆದ್ಯತೆಗಳು ಎಂದು ಅವರು ವಿವರಿಸಿದರು.
ಮೈತ್ರಿ ಪಕ್ಷ ಜೆಡಿಎಸ್ ಜೊತೆಗಿನ ಸಮನ್ವಯವನ್ನೂ ಇನ್ನಷ್ಟು ಗಟ್ಟಿಗೊಳಿಸಲಾಗುವುದು ಎಂದು ತಿಳಿಸಿದರು.




