Homeವಿದ್ಯಮಾನಕ್ಷಯರೋಗ ಸಾವು 2015ರಿಂದ ಶೇ 38ರಷ್ಟು ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ ವರದಿ

ಕ್ಷಯರೋಗ ಸಾವು 2015ರಿಂದ ಶೇ 38ರಷ್ಟು ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ ವರದಿ

ಭಾರತದಲ್ಲಿ ಕ್ಷಯರೋಗದಿಂದ (ಟಿಬಿ) ಸಂಭವಿಸುವ ಸಾವಿನ ಪ್ರಮಾಣ 2015ಕ್ಕೆ ಹೋಲಿಸಿದರೆ ಶೇ 38ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಇತ್ತೀಚಿನ ವರದಿ ತಿಳಿಸಿದೆ. ಈ ಇಳಿಕೆಯ ವೇಗ ಜಾಗತಿಕ ಸರಾಸರಿಗಿಂತ ಹೆಚ್ಚು ಎಂಬುದು ಗಮನಾರ್ಹ.

ಆದರೂ ವಿಶ್ವದ ಒಟ್ಟು ಕ್ಷಯ ಪ್ರಕರಣಗಳಲ್ಲಿ ಸುಮಾರು ಕಾಲು ಭಾಗ ಭಾರತದಲ್ಲೇ ದಾಖಲಾಗುತ್ತಿರುವುದರಿಂದ, ರೋಗದ ಹೊರೆ ಇನ್ನೂ ಅತಿ ಹೆಚ್ಚು ಇರುವ ದೇಶವಾಗಿ ಭಾರತ ಮುಂದುವರಿದಿದೆ.

ಶೀಘ್ರ ಪತ್ತೆ, ಉಚಿತ ಔಷಧಿ ವಿತರಣೆ ಹಾಗೂ ಚಿಕಿತ್ಸೆ ಪೂರ್ಣಗೊಳಿಸುವಂತೆ ರೋಗಿಗಳಿಗೆ ನೀಡುವ ಪೌಷ್ಟಿಕ ನೆರವು ಈ ಸಾಧನೆಗೆ ಕಾರಣ ಎನ್ನಲಾಗಿದೆ. ಗ್ರಾಮೀಣ ಭಾಗದಲ್ಲಿ ತಪಾಸಣೆ ಇನ್ನಷ್ಟು ವಿಸ್ತರಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಸಂಬಂಧಿತ ಸುದ್ದಿ

ಪ್ರತಿಕ್ರಿಯೆ ನೀಡಿ

ದಯವಿಟ್ಟು ನಿಮ್ಮ ಪ್ರತಿಕ್ರಿಯೆ ಬರೆಯಿರಿ!
Please enter your name here

- ಜಾಹೀರಾತು -
Ganpath Technologies – Web Design & Development, ganpath.com, +91-9739518207

ಹೆಚ್ಚು ಓದಿದ್ದು

Recent Comments