Homeಅಪರಾಧದೈವಸ್ಥಾನ ಕಳ್ಳತನ ಪ್ರಕರಣ: ಅಂತರರಾಜ್ಯ ತಂಡದ ನಾಲ್ವರ ಬಂಧನ, ₹17.20 ಲಕ್ಷ ಮೌಲ್ಯದ ಸ್ವತ್ತು ವಶ

ದೈವಸ್ಥಾನ ಕಳ್ಳತನ ಪ್ರಕರಣ: ಅಂತರರಾಜ್ಯ ತಂಡದ ನಾಲ್ವರ ಬಂಧನ, ₹17.20 ಲಕ್ಷ ಮೌಲ್ಯದ ಸ್ವತ್ತು ವಶ

ಮೂಲ್ಕಿ ಸಮೀಪದ ಕಿಲ್ಪಾಡಿ ಗ್ರಾಮದ ದೈವಸ್ಥಾನವೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಅಂತರರಾಜ್ಯ ಕಳ್ಳರ ತಂಡದ ನಾಲ್ವರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿ ಒಟ್ಟು ₹17.20 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಕರಾವಳಿ ಭಾಗದ ಇತರ ದೇವಸ್ಥಾನ ಕಳ್ಳತನ ಪ್ರಕರಣಗಳಲ್ಲೂ ಈ ತಂಡದ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಸಂಬಂಧಿತ ಸುದ್ದಿ

ಪ್ರತಿಕ್ರಿಯೆ ನೀಡಿ

ದಯವಿಟ್ಟು ನಿಮ್ಮ ಪ್ರತಿಕ್ರಿಯೆ ಬರೆಯಿರಿ!
Please enter your name here

- ಜಾಹೀರಾತು -
Ganpath Technologies – Web Design & Development, ganpath.com, +91-9739518207

ಹೆಚ್ಚು ಓದಿದ್ದು

Recent Comments